Thursday 5 December 2013

ನಾ ಭೀಷ್ಮನಲ್ಲ.



ಬಾರಿನಲ್ಲಿ ಕುಳಿತ ಗೆಳೆಯ
ಎದೆ ಮುಟ್ಟಿ ಹೇಳಿದ
ಗುರು ಇದೆ ನನ್ನ ಕೊನೆಯ ಪೆಗ್ಗು
ಬಿಡುವೆ ನಾಳೆಯಿಂದ ಪೆಗ್ಗು
ಇದು ನನ್ನ ಭೀಷ್ಮ ಪ್ರತಿಜ್ಞೆ
ಎ೦ದು ಅಂದವನು ಮರುದಿನ
ಗುಟುಕರಿಸುತ್ತಾ ಕುಳಿತ್ತಿದ್ದ ಬಾರಿನಲಿ
ಕೇಳಿದೆ ಎಲ್ಲಿ ನಿನ್ನ ಭೀಷ್ಮ ಪ್ರತಿಜ್ಞೆ ಎ೦ದು
ನಾ ಭೀಷ್ಮನಲ್ಲ ಎ೦ದು ನಕ್ಕ.

ನನ್ನ ಗೆಳೆಯ ಗೆಳೆತಿಗೆ ಹೇಳಿದ್ದ
ಇದು ನನ್ನ ಭೀಷ್ಮ ಪ್ರತಿಜ್ಞೆ
ಮದುವೆ ಆಗುವೆ ನಿನ್ನನ್ನೆ ಎ೦ದು
ಬೆರೆಯವಳ ಕೈ ಹಿಡಿದ ದಿನ ದಂದು
ಕೇಳಿದೆ ಎಲ್ಲಿ ನಿನ್ನ ಭಿಷ್ಮ ಪ್ರತಿಜ್ಞೆ ಎ೦ದು
ನಾ ಭೀಷ್ಮನಲ್ಲ ಎ೦ದು ನಕ್ಕ.

ಬೆರಳುಗಳ ಮಧ್ಯ ಇದ್ದ ಸಿಗರೇಟನ್ನು
ದೂರಕ್ಕೆ ಎಸೆದು ಹೇಳಿದ್ದ ಗೆಳೆಯ
ಇದು ನನ್ನ ಭಿಷ್ಮ ಪ್ರತಿಜ್ಞೆ
ಹಚ್ಚುವದಿಲ್ಲ ನಾ ಸಿಗರೇಟು ಅಂತ
ಹೇಳಿ ನಾಲ್ಕೇ ದಿನವಾಗಿತ್ತು
ಮತ್ತೆ ಬೆರಳುಗಳ ಮಧ್ಯ ಇದ್ದ ಸಿಗರೇಟು
ಕಂಡು ಎಲ್ಲಿ ನಿನ್ನ ಭೀಷ್ಮ ಪ್ರತಿಜ್ಞೆ ಅಂದೆ
ನಾ ಭೀಷ್ಮನಲ್ಲ ಎ೦ದು ನಕ್ಕ.

Sunday 8 September 2013

ಹಾಸ್ಯ ಕಿರು ನಾಟಕ


ಸಾವಿತ್ರಮ್ಮ ಮನೆ ಗುಡಿಸುತ್ತಲೆ ಮಾತಾಡುತ್ತಾ ಇದ್ಧಾಳೆ ಶಾಮರಾಯರು ಪೇಪರಗಳನ್ನು ಜೋಡಿಸುತ್ತಾಇದ್ದಾರೆ ಶಾಮರಾಯರ ಮಗ ಟೈಯನ್ನು ಗಂಟು ಹಾಕಿಕೊಳ್ಳು ತ್ತಿದ್ದಾನೆ.

ಸಾವಿತ್ರಮ್ಮ ;- ಎನು ಕಾಲ ಬಂತು ಅಂತೀನಿ., ಮಗನಿಗೆ ಕನ್ಯಾ ನೋಡಲು ಅವರ ಮನೆಗೆ ಹೋಗಿ ಉಪ್ಪಿಟ್ಟು ಕೇಸರಿ ಭಾತು ಬಿಸಿಬಿಸಿ ಕಾಫಿ ಕುಡಿಯೋಣ ಅಂತ ಅಂದಿದ್ದೆ , ಈಗ ಆಗಿನ ಕಾಲ ಅಲ್ಲ ಸಾವಿತ್ರಮ್ಮ ನವರೇ ಅವರೇ ನಿಮ್ಮ ಮನೆಗೆ ಬರುತ್ತಾರೆ, ಎ೦ದು ನಮ್ಮ ನಾರಾಯಣ ಶಾಸ್ತ್ರಿ ಹೇಳುತ್ತಲೆ ಬಂದಿದ್ದಾರೆ. ಎನಿಲ್ಲ ಅಂದರೂ ಒಂದು ಸಿಹಿ ಒಂದು ಖಾರ ಒಂದು ಕಾಫೀ ಮಾಡಿ ಮಾಡಿ ನಾ ಸುಸ್ತ ಆಗಿನಿ, ನನ್ನ ಮಗ ತಯ್ಯಾರಾಗಿ ಆಗಿ ಆಗಿ ಅವನು ಸುಸ್ತ ಆಗ್ಯಾನ. ಇದು ಎಷ್ಟೆನೆ ಸಂದರ್ಶನವೋ, ಕಾಲ ಕೂಡಿಬರಬೇಕು . ಕಾಲ ಅಂದರ ನೆನಪಾಯ್ತು , ರೀ, ಕೇಳಸಲಿಲ್ಲವೆ, ನಾನೆ ನಿಮ್ಮನ್ನು ಕರೆದುದ್ದು ಸಮಯ ಎಷ್ಟ ಆಗಿದೆ.
ಶಾಮರಾಯರು;- ಆಗಿದೆ ಕಣೆ ಅವರು ಬರಹೊತ್ತು, ನಿನ್ನ ಮಗಗೆ ಹೇಳು ನೀಟಾಗಿ ಡ್ರಸ್‌ಮಾಡಿಕೊಳ್ಳಲು. ಮೊನ್ನೆ ಬಂದವಳು ಒಂದು ಸರಿಯಾಗಿ ಡ್ರಸ್‌ ಮಾಡಿಕೊಳ್ಳಲು ಬರುವದಿಲ್ಲ ನಿಮ್ಮ ಮಗನಿಗೆ ಅಂತೆ ,ಅದಕ್ಕೆ ನಮ್ಮ ಮಗಳು ನಿಮ್ಮ ಹುಡಗನ್ನ ರಿಜಕ್ಟ ಮಾಡಿದಳು .
ಸಾವಿತ್ರಮ್ಮ;- ನಾ ಯಾಕ ಹೇಳಬೇಕು ನೀವೇ ಹೇಳ್ರಿ, ನೀವು ನನ್ನ ನೋಡಲಿಕ್ಕಿ ಹೇಗೆ ಬಂದಿದ್ದಿರಿ . ಅಹಾ ! ಆ ನಿಮ್ಮ ಪ್ಯಾಂಟ ಅದಕ ಒಪ್ಪದ ನಿಮ್ಮ ಶರ್ಟು, ಹವಾಯಿ ಚಪ್ಪಲಿ ಅವೆಲ್ಲ ನೋಡಿ ನಾ ಎನರ ಅಂದನೆ.ನನ್ನ ಅಪ್ಪ ಅಮ್ಮಗೆ ನೀವು ಒಪ್ಪಗೆ ಆದರಿ,ನನ್ನ ಒಂದು ಮಾತು ಕೇಳಲಿಲ್ಲ.
ಶಾಮರಾವ;-_ ಆಗಿನ ಕಾಲ ಹಂಗ ಇತ್ತು ಈಗೀನ ಕಾಲ ದಂಗ ನಾವು ಇರಬೇಕಲ್ಲ ಕಾಲಾಯ ತಸ್ಮೈ ನಮಃ.
ಸಾವಿತ್ರಮ್ಮ :- ಬಂದ್ರು ಅಂತ ಕಾಣತ್ತದೆ. ರಾಜ,, ನಾವು ಕರೆಯುವವರಿಗೆ ನೀ ಬರಬೇಡ. ಎಲ್ಲಾ ತಯ್ಯಾರ ಮಾಡಿಕೊಂಡ್ಯಾ? ಹಿಂದೆ ನಿನ್ನ ನೋಡಲು ಬಂದ ಹುಡಿಗಿಯರು ಕೇಳಿದ ಪ್ರಶ್ನೆ ಗಳೆಲ್ಲ ನೆನಪಿವೆ ತಾನೆ, ಧೈರ್ಯವಾಗಿ ಉತ್ತರ ಹೇಳು.(ಅಷ್ಟರಲ್ಲಿ ಬೆಲ್‌ಆಗುತ್ತದೆ)
ಶಾ - ಬನ್ನಿ ಒಳಗೆ ಬನ್ನಿ.(ಮಗಳು ಮೊದಲು ನಂತರ ಅವರಮ್ಮ ಆನಂತರ ಹುಡಿಗಿ ತಂದೆಬರುವರು)
ಸಾ:- ಕುಳಿತು ಕೊಳ್ಳಿ (ಎ೦ದು ಒಳಗಡೆಹೋಗಿ ನೀರು ತರುವಳು)
ಹು.ತಾಯಿ:- ಎಲ್ಲಿ ಹುಡಗ ಕಾಣಸವಲ್ಲ ನಲ್ಲ. ಕರಿಯಿರಿ.
ಸಾ:- ಬಾ ರಾಜು ಬಾ (ರಾಜು ನಾಚುತ್ತಾ ಬಂದು ಹುಡಿಗಿಯ ಮುಂದೆ ಇದ್ದ ಕುರ್ಚಿಯಲ್ಲಿ ಮುದುಡಿ ಕುಳಿತು ಕೊಳ್ಳುವನು)
ಹು.ತಾಯಿ:_ ಹೆಸರೇನು?
ಹುಡಗ:- ರಾಜಕುಮಾರ ಎಸ್,
ಹುಡಗಿ:- ಕೇಳಸಲಿಲ್ಲ ಸ್ವಲ್ಪು ಜೋರಾಗಿ ಹೇಳಿ
ಹುಡಗ:- ರಾಜಕುಮಾರ.ಎಸ್.
ಹುಡಗಿ:- ಎಸ್ ಅಂದರೆ.
ಶಾಮರಾವ:- ಅದು ನನ್ನ ಹೆಸರಮ್ಮ ಶಾಮರಾವ.
ಹು ತಾಯಿ:- ಶಾಮರಾಯರೇ ನನ್ನ ಮಗಳು ನಿಮ್ಮ ಮಗನಿಗೆ ಕೇಳಿದ್ದು ಅವರೇ ಹೇಳಲಿ .
(ಅವರೆಲ್ಲರು ಒಳಗಡೆ ಹೋಗುವರು.)
ಹುಡಗಿ:- ನಿಮ್ಮ ಸಂಬಳ ಎಷ್ಟು
ಹುಡಗ:- ಹನ್ನೆರಡು (ಎ೦ದು ಹೆಮ್ಮೆ ಯಿಂದ ಹೇಳುತ್ತಾನೆ )
ಹುಡಗಿ :- ನನಗೆ ಹದಿನಾಲ್ಕು .ನಿಮ್ಮ ಮನೆಯಲ್ಲಿ ನೀವು ಯಾವ ಕಾರು ಇಟ್ಟಿದ್ದಿರಿ?
ಹುಡಗ:- ನನಗೆ ಡ್ರೈವಿಂಗ ಗೊತ್ತಿಲ್ಲ.ಅದಕ್ಕಾಗಿ ಕಾರು ಕೊಂಡಿಲ್ಲ.
ಹಡಗಿ: ನಿಮಗೆ ಡ್ರೈವಿಂಗ ಗೊತ್ತಿಲ್ಲ ಪರವಾಗಿಲ್ಲ ,ನನಗೆ ಗೊತ್ತು. ಅಡಿಗೆ ಮಾಡುತ್ತಿರಾ?
ಹುಡಗಾ:- ನಾನಾ \
ಹುಡಗಿ - ನಿಮಗೇ ಕೇಳುತ್ತಾ ಇರೋದು ,ನನಗೆ ಅಡಿಗೆ ಮಾಡಲು ಬರುವದಿಲ್ಲ ಅದಕ್ಕೆ ಕೇಳಿದೆ.
ಹುಡಗಿ:- ಸಂಗೀತ ಕಲಿತಿದ್ದಿರಾ?
ಹುಡಗಾ:- ಇಲ್ಲ ಆದರೆ ನನಗೆ ಹಾಡು ಹಾಡಲು ಬರುತ್ತದೆ,ನಾ ಚಿಕ್ಕವನಿದ್ದಾಗ ದೇವರ ನಾಮಕಲತಿದ್ದೆ . ಬರುತ್ತವೆ. ಒಂದು ಹಾಡಲೇ?
ಹುಡಗಿ:- ದೇವರ ನಾಮ ಬೇಡ ಅವೆಲ್ಲ ತುಂಬಾ ಹಳೆವು, ಒಂದು ಪಾಪ ಸಂಗೀತ ಹೇಳಿ,
ಹುಡಗಾ:- ತಲೆ ಕೆಳಗೆ ಹಾಕುತ್ತಾನೆ.
ಹುಡಗಿ> ನಿಮಗೆ ಗಿಟಾರ ಬರುತ್ತದೆಯೆ?
ಹುಡಗ:- ಸುಮ್ಮನೆ ಕೂಡುತ್ತಾನೆ
ಹುಡಗಿ:- ನನಗೆ ಗಿಟಾರ ಬರುತ್ತದೆ. ಡ್ಯಾನ್ಸ್ ಬರುತ್ತೋ,
ಸಾವಿತ್ರಮ್ಮ :- ನನಗೆ ಬರುತ್ತೆ, ಭರತನಾಟ್ಯ ಬರತಿತ್ತು ಈಗ ಬರಲಮ್ಮ (ಪ್ಲೇಟತರುತ್ತಾಳೆ.)

ಹುಡಗಿ:- ಮಮ್ಮಿ (ಎ೦ದು ಸಾವಿತ್ರಮ್ಮನನ್ನು ನೋಡುವಳು ಸಾವಿತ್ರಮ್ಮ ನೆ ಲ ನೋಡುತ್ತಾ ಹೋಗುವಳು)
ಹುಡಗಿ:- ಸ್ವಿಮಿಂಗ
ಹುಡಗ:- ಕೆರೆಯಲ್ಲಿ ನಾ ಚಿಕ್ಕವಿದ್ದಾಗ ಆಡಿದ್ದೆ, ಈಗ ಇಲ್ಲ.
ಹುಡಗಿ:- ನನಗೆ ಸ್ವಿಮಿಂಗ ಬರುತ್ತೆ. ನಾ ಬಹುಮಾನ ಗೆದ್ದಿದ್ದೇನೆ. ನಾಟಕ ಸಿನಿಮಾದಲ್ಲಿ ಆಸಕ್ತಿ ಇದೆ ನಾ ?
ಹುಡಗಾ:- ಸಿನಿಮಾ ನೋಡುತ್ತೇನೆ ಇತ್ತಿಚಿಗೆ ಕಡ್ಡಿಪುಡಿ ನೋಡಿದೆ.
ಹುಡಗಿ:-ಇಂಗ್ಲೀಷ ಮೂವಿ
ಹುಡಗ:- ಬೆನಹರ್ , ಕೋಮಾ ಇನ್ನೊಂದು ಇಂಗ್ಲೀಷ ಚಿತ್ರ ನೋಡಿದ್ದೇನೆ ಹೆಸರು ನೆನಪಿಲ್ಲ.
ಹುಡಗಿ:- ನನ್ನ ಅಜ್ಜನ ಕಾಲದ ಸಿನಿಮಾಗಳು, ಹೊಸವು ಯಾವು ನೋಡಿಲ್ಲವೆ. ನಾಟಕದಲ್ಲಿ ಪಾತ್ರ ವಹಿಸುತ್ತಿರಾ?ನಾ ಇಂಗ್ಲೀಷ ನಾಟಕದಲ್ಲಿ ಪಾತ್ರ ವಹಿಸುತ್ತೇನೆ.
ಹುಡಗ:- ಹೌದಾ ಒಳ್ಳೆಯದು,ತುಂಬಾ ಇಂಟ್ರಸ್ಟಿಂಗ ಇದೆ ನಿಮ್ಮ ಲೈಪ್‌.
ಹುಡಗಿ :- ಥಾಂಕ್ಸ. ನೀವು ನನ್ನ ಮದುವೆ ಆಗತ್ತೀರಾ?
ಹುಡಗಾ:- ಸುಮ್ಮನೆ ಕುಳಿತ
ಹುಡಗಿ:- ನಾ ನಿಮಂಥವರನ್ನು ಮದುವೆ ಆಗಲ್ಲ. ನನಗೆ ಮಾಡರ್ನಗಂಡಬೇಕು (ಎ೦ದು ಎದ್ದು ನಿಂತಳು )ಮಮ್ಮಿ (ಹುಡಗಿಯ ಮಮ್ಮಿ ಡ್ಯಾಡಿ ಬಂದರು ರಾಜುನ ತಂದೆ ತಾಯಿಯರು ಬಂದರು)
ಹುಡಗಿತಾ:- ನಿಮಗೆ ನಂತರ ತಿಳಿಸುತ್ತೇವೆ.
ಸಾವಿತ್ರಮ್ಮ:- ಅಷ್ಟೆ ಮಾಡಿ ಬೇಗ ತಿಳಿಸಿ (ಅವರು ಹೋಗುವರು) ಹುಡಗಿ ಪರವಾಗಿಲ್ಲ.
ಹುಡಗಾ:- ನಿನ್ನ ಸೊಸೆ ಆಗಲಿಕ್ಕೆ ಅಲ್ಲಮ್ಮ ಒಬ್ಬ ಉತ್ತಮ ನಟಿ ಆಗಲು ಪರವಾಗಿಲ್ಲ . ಶಾಸ್ರ್ತೀಗೆ ಹೇಳಮ್ಮ. ಈ ಹುಡಗಿಗೆ ನಾ ಒಪ್ಪಲ್ಲವೆಂದು ಬೇರೆ ಹುಡಗಿಯರಿದ್ದರೆ ತಿಳಿಸಲಿ .